Sriman Madhvacharyaru
ಶೀಮನ್ಮಧ್ವಾಚಾರ್ಯರು
Although it has been famously known as Sri Vyasaraja Matha since his time due to the intensity and brilliance of his influence, the Vyasaraja institution had a great lineage even before that, which is as follows:
ಶ್ರೀವ್ಯಾಸರಾಜಮಠವೆಂದು, ವ್ಯಾಸರಾಜರ ಪ್ರಭಾವದ ತೀವ್ರತೆಯಿಂದಾಗಿಹಾಗೂ ಪ್ರಖರತೆಯಿಂದಾಗಿ ಅವರ ಕಾಲದಿಂದೀಚೆಗೆ ಆ ಹೆಸರು ಪ್ರಸಿದ್ದವಾಗಿದ್ದರೂ ವ್ಯಾಸರಾಜ ಸಂಸ್ಥಾನವು ಅದಕ್ಕೂ ಪೂರ್ವದಲ್ಲೇ ಮಹಾನ್ ಪರಂಪರೆಯನ್ನು ಹೊಂದಿತ್ತು ಅದು ಹೀಗಿದೆ:
- Hamsanamaka Paramatma
- Chaturmukha Brahmadevaru
- Sanakaru
- Durvasaru
- Jnananidhigalu
- Garudavahanaru
- Kaivalyatirtharu
- Jnaneshatirtharu
- Paratirtharu
- Satyaprajnatirtharu
- Prajnatirtharu
- Achyutaprajnatirtharu
- ಹಂಸನಾಮಕ ಪರಮಾತ್ಮ
- ಚತುರ್ಮುಖ ಬ್ರಹ್ಮದೇವರು
- ಸನಕರು
- ದೂರ್ವಾಸರು
- ಜ್ಞಾನನಿಧಿಗಳು
- ಗರುಡವಾಹನರು
- ಕೈವಲ್ಯತೀರ್ಥರು
- ಜ್ಞಾನೇಶತೀರ್ಥರು
- ಪರತೀರ್ಥರು
- ಸತ್ಯಪ್ರಜ್ಞತೀರ್ಥರು
- ಪ್ರಾಜ್ಞತೀರ್ಥರು
- ಅಚ್ಯುತಪ್ರಜ್ಞತೀರ್ಥರು
After them, by the command of Hari, Vayu Deva incarnated as Anandatirtha. Madhvacharya is the reviver of the Vaishnava Siddhanta. His philosophy is called Tattvavada, but its most popular name is Dvaita Siddhanta. The books he wrote to propagate this philosophy became the Sarvamula Granthas.
ಇವರ ನಂತರ ಹರಿಯ ಆಜ್ಞೆಯಿಂದ ವಾಯುದೇವರು ಆನಂದತೀರ್ಥರಾಗಿ ಅವತರಿಸಿದರು. ಮಧ್ವಾಚಾರ್ಯರು ವೈಷ್ಣವಸಿಧ್ಧಾಂತದ ಪುನಃಪ್ರವರ್ತಕರು. ಅವರ ಸಿಧ್ಧಾಂತಕ್ಕೆ ತತ್ವವಾದ ಎಂದು ಹೆಸರು. ಆದರೆ ಅತಿ ಪ್ರಚಲಿತವಾದ ಹೆಸರು ದ್ವೈತಸಿಧ್ಧಾಂತ ಎಂದು. ಈ ಸಿಧ್ಧಾಂತದ ಪ್ರಚಾರಕ್ಕಾಗಿ ಅವರು ರಚಿಸಿದ ಗ್ರಂಥಗಳೇ ಸರ್ವಮೂಲಗ್ರಂಥಗಳೆನಿಸಿದವು.
The work 'Sri Madhvavijaya' is the biography of Srimadhvacharya. This work was written by Narayanapanditacharya, a contemporary who saw Madhvacharya with his own eyes, making it an authentic document.
ಶ್ರೀ ಮಧ್ವವಿಜಯ ಎಂಬ ಕೃತಿಯು ಶ್ರೀಮಧ್ವಾಚಾರ್ಯರ ಜೀವನ ಚರಿತ್ರೆ. ಈ ಕೃತಿಯು ಮಧ್ವಾಚಾರ್ಯರನ್ನು ಕಣ್ಣಾರೆ ಕಂಡವರು, ಸಮಕಾಲೀನರು ಆದ ನಾರಾಯಣಪಂಡಿತಾಚಾರ್ಯರು ಬರೆದ ಗ್ರಂಥ ಹಾಗಾಗಿ ಇದೂಂದು ಅಧಿಕೃತ ದಾಖಲೆ.
In this book, Narayanapanditacharya says this about Madhvacharya's works:
ಈ ಗ್ರಂಥದಲ್ಲಿ ನಾರಾಯಣಪಂಡಿತಾಚಾರ್ಯರು ಮಧ್ವಾಚಾರ್ಯರ ಗ್ರಂಥಗಳ ಬಗ್ಗೆ ಹೀಗೆ ಹೇಳುವರು
ನಾನಾ ಸುಭಾಷಿತ-ಸ್ತೋತ್ರ-ಗಾಥಾದಿ-ಕೃತಿ-ಸತ್ಕೃತೀಃI
ತ್ವಯಿ ರತ್ನಾಕರೇ ರತ್ನ-ಶ್ರೇಣೀರ್ವಾ ಗಣಯಂತಿ ಕೇ II
The meaning of the above shloka is as follows:
ಈ ಮೇಲಿನ ಶ್ಲೋಕದ ಅರ್ಥ ಇಂತಿದೆ.
"Who can count the pearls of the sea and the gems of Acharya's works?" This exclamation makes it clear that Acharya's works were not just thirty-seven.
ಕಡಲ ಮುತ್ತುಗಳನ್ನು ಮತ್ತು ಆಚಾರ್ಯರ ಕೃತಿರತ್ನಗಳನ್ನು ಎಣಿಸುವರಾರು? ಎನ್ನುವ ಈ ಉದ್ಗಾರ ಆಚಾರ್ಯರ ಕೃತಿಗಳು ಬರಿಯ ಮೂವತ್ತೇಳಷ್ಟೆ ಅಲ್ಲ ಎನ್ನುವುದನ್ನು ಸ್ಪುಟಪಡಿಸುತ್ತದೆ.
In the 29th shloka of "Prameyanavamalika" (Anumadhvavijaya), the words "Shatagranthakarta" (author of hundreds of texts) support this. Hence, some may have been lost to time.
“ಪ್ರಮೇಯನವಮಾಲಿಕಾ”(ಅಣುಮಧ್ವವಿಜಯ) ದಲ್ಲಿ ೨೯ನೇಯ ಶ್ಲೋಕದಲ್ಲಿ “ಶತಗ್ರಂಥಕರ್ತಾ” ಅರ್ಥಾತ್ ನೂರಾರು ಗ್ರಂಥಗಳನ್ನು ರಚಿಸಿದವರು ಎಂಬ ಮಾತು ಇದನ್ನೆ ಸಮರ್ಥಿಸುತ್ತದೆ. ಹಾಗಾಗಿ ಕಾಲವಷಾತ್ ಕೆಲವು ನಷ್ಟವಾಗಿರಬಹುದು.
Sri Vyasarajaru
ಶ್ರೀ ವ್ಯಾಸರಾಜರು
After Acharya, Vyasarajaru incarnated as the twelfth. The lineage between Acharya and Vyasarajaru is as follows:
ಆಚಾರ್ಯರ ನಂತರ ಹನ್ನೆರಡವನೆಯರಾಗಿ ವ್ಯಾಸರಾಜರು ಅವತರಿಸಿದರು ಆಚಾರ್ಯರ ಮತ್ತು ವ್ಯಾಸರಾಜರ ನಡುವಿನ ಪರಂಪರೆ ಹೀಗಿದೆ.
- Sri Padmanabha Tirtharu
- Sri Narahari Tirtharu
- Sri Madhava Tirtharu
- Sri Akshobhya Tirtharu
- Sri Jayatirtharu
- Sri Vidyadhiraja Tirtharu
- Sri Rajendra Tirtharu
- Sri Jayadhvaja Tirtharu
- Sri Purushottama Tirtharu
- Sri Brahmanya Tirtharu
- ಶ್ರೀ ಪದ್ಮನಾಭ ತೀರ್ಥರು
- ಶ್ರೀ ನರಹರಿ ತೀರ್ಥರು
- ಶ್ರೀ ಮಾಧವ ತೀರ್ಥರು
- ಶ್ರೀ ಅಕ್ಷೋಭ್ಯ ತೀರ್ಥರು
- ಶ್ರೀ ಜಯತೀರ್ಥರು
- ಶ್ರೀ ವಿಧ್ಯಾಧಿರಾಜ ತೀರ್ಥರು
- ಶ್ರೀ ರಾಜೇಂದ್ರ ತೀರ್ಥರು
- ಶ್ರೀ ಜಯಧ್ವಜ ತೀರ್ಥರು
- ಶ್ರೀ ಪುರುಷೋತ್ತಮ ತೀರ್ಥರು
- ಶ್ರೀ ಬ್ರಹ್ಮಣ್ಯ ತೀರ್ಥರು
Then, by the grace of Sri Hari, Prahlada Raja incarnated as Vyasarajaru.
ನಂತರ ಶ್ರೀಹರಿಯ ಅನುಗ್ರಹದಿಂದ ಪ್ರಹ್ಲಾದರಾಜರು ವ್ಯಾಸರಾಜರಾಗಿ ಅವತರಿಸಿದರು.
The life of Sri Vyasarajaru, who was the Rajaguru of the Vijayanagara Empire, the head of the Vedanta empire of Madhvacharya's great lineage, and the chancellor of the Vishwa Pavanmatha, was colourful. His fame has spread in the air of the world and has become a song of centuries, spreading the joy of Vyasa everywhere.
ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ, ಮಧ್ವಾಚಾರ್ಯರ ಮಹಾನ್ ಪರಂಪರೆಯ ವೇದಾಂತ ಸಾಮ್ರಾಜ್ಯದ ಪೀಠಾದಿಪತಿಗಳಾಗಿದ್ದ, ವಿಶ್ವ ಪಾವನಮಠದ ಕುಲಪತಿಗಳಾಗಿದ್ದ ಶ್ರೀ ವ್ಯಾಸರಾಜರ ಬದುಕೆಲ್ಲ ವರ್ಣರಂಜಿತ. ಅವರ ಕೀರ್ತಿಚಂದನ ವಿಶ್ವದ ಗಾಳಿಯಲ್ಲಿ ಹರಡಿ ಶತಶತಮಾನಗಳ ಹಾಡಾಗಿ, ವ್ಯಾಸಸಂಭ್ರಮವನ್ನು ಎಲ್ಲೆಡೆಯೂ ಪ್ರಸರಿಸುತ್ತಿದೆ.
Sri Vyasarajaru, a great soul, upheld the Sat-siddhanta of Acharya to the highest peaks of the world by composing the great works Chandrika, Nyayamruta, and Tarkatandava, which are famous as the three gems of the Saraswata world, and adorned the Lord with his devotional songs.
ಸಾರಸ್ವತ ಪ್ರಪಂಚದ ರತ್ನತ್ರಯಗಳೆಂದೇ ಖ್ಯಾತವಾದ ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ ಎಂಬ ಸದ್ಗ್ರಂಥಗಳನ್ನು ರಚಿಸಿ ಆಚಾರ್ಯರ ಸತ್ಸಿಧಾಂತವನ್ನು ಜಗತ್ತಿನ ಉತ್ತುಂಗ ಶೃಂಗದೆತ್ತರಕ್ಕೆ ಎತ್ತಿಹಿಡಿದು, ತಮ್ಮ ಭಕ್ತಿಗೀತೆಗಳಿಂದ ಭಗವಂತನನ್ನು ಪರಿಪರಿಯಾಗಿ ಅಲಂಕರಿಸಿದ ಮಹಾನುಭಾವರು ಶ್ರೀ ವ್ಯಾಸರಾಜರು.
From the same heart that composed Nyayamruta, Tarkatandava, and Chandrika, he also composed Kannada padas, padyas, and suladis, pouring the mantra-siddhi of Sanskrit shlokas into Dasa Sahitya. Vyasarajaru was the one who gave Dasa Deeksha to Purandaradasa and Kanakadasa. Later, Sri Vyasaraja was the great soul who worshipped Tirumalesha at Tirupati for twelve years.
ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆಗಳನ್ನು ರಚಿಸಿದ ಹೃದಯದಿಂದಲೇ ಕನ್ನಡ ಪದಪದ್ಯ ಸುಳಾದಿಗಳನ್ನು ರಚಿಸಿ ಸಂಸ್ಕೃತ ಶ್ಲೂಕಗಳ ಮಂತ್ರಸಿದ್ದಿಯನ್ನು ದಾಸಸಾಹಿತ್ಯಕ್ಕೆ ಧಾರೆಯೆರೆದರು . ವ್ಯಾಸರಾಜರು ಪುರಂದರದಾಸರು ಮತ್ತು ಕನಕದಾಸರಂತವರಿಗೆ ದಾಸದೀಕ್ಶೇ ನೀಡಿದವರು. ನಂತರ ಶ್ರೀ ವ್ಯಾಸರಾಜರು ತಿರುಪತಿ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳ ಕಾಲ ತಿರುಮಲೇಶನನ್ನು ಪೂಜಿಸಿದ ಮಹಾನುಭಾವರು.